1962 ರ ಯುದ್ಧದ ನಂತರ ಮುಚ್ಚಲಾಗಿದ್ದ ಕೈಲಾಸದ ಮಾನಸ ಸರೋವರದ ದಾರಿಯನ್ನು ಯಶಸ್ವಿಯಾಗಿ ತೆರೆಯುವಲ್ಲಿ ಸಫಲತೆಯನ್ನು ಕಂಡ ವ್ಯಕ್ತಿ : ಡಾ. ಸುಬ್ರಮಣಿಯನ್ ಸ್ವಾಮಿ
ಡಾ. ಸುಬ್ರಮಣಿಯನ್ ಸ್ವಾಮಿ |
1962 ರ ಯುದ್ಧದ ನಂತರ ಭಾರತ ಹಾಗೂ ಚೀನಾದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಈ ಸಂಬಂಧವನ್ನು ಸರಿಪಡಿಸುವಲ್ಲಿ ಯಾರು ಕೂಡ ವಿಚಾರಿಸಲಿಲ್ಲ. ಸುಮಾರು 15 ವರ್ಷಗಳು ಕೈಲಾಸದ ತಪ್ಪಲಲ್ಲಿರುವ ಮಾನಸ ಸರೋವರಕ್ಕೆ ಯಾತ್ರೆ ಕೈಗೊಳ್ಳುವಂತಿರಲಿಲ್ಲ. ಕೈಲಾಸ ಶಿವನು ನೆಲೆಸಿದ ತಾಣ, ಅದರ ತಪ್ಪಲಲ್ಲಿರುವ ಮಾನಸ ಸರೋವರವು ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ಪವಿತ್ರವಾದದ್ದು. ಆದರೆ 1977 ರಲ್ಲಿ, ’ತುರ್ತು ಪರಿಸ್ಥಿತಿ’ ಘೋಷಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಸೋತು, ಪ್ರಥಮ ಭಾರಿಗೆ ಜನತಾ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬರುವವರೆಗು ಯಾರು ಯೋಚಿಸಿರಲಿಲ್ಲ. ಅಲ್ಲಿಂದ ಭಾರತ ಹಾಗೂ ಚೀನಾದ ನಡುವಿನ ವೈರತ್ವವು ಕೊನೆಗೊಂಡು, ಮಿತ್ರತ್ವವನ್ನು ಬೆಳೆಸಿಕೊಳ್ಳಲು ಮತ್ತು ಕೈಲಾಸ ಮಾನಸ ಸರೋವರದ ದಾರಿಯನ್ನು ಯಾತ್ರಾರ್ಥಿಗಳಿಗೆ ತೆರೆಯಲು ಮಾತುಗತೆಯು ಪ್ರಾರಂಭಗೊಳ್ಳುತ್ತದೆ.
ಕೈಲಾಸ ಪರ್ವತ |
ಈ ವೈರತ್ವದ ನಡುವೆಯು ಕೂಡ ಒಬ್ಬ ಮನುಷ್ಯ ಆಗಾಗ್ಗೆ ಚೀನಾದ ರಾಯಭಾರಿ ಕಛೇರಿಗೆ ಬೇಟಿ ನೀಡಿ, ಮಿತ್ರತ್ವವನ್ನು ಬೆಳೆಸಲು ಸದಾ ಶ್ರಮಿಸುತ್ತಿದ್ದರು. ಅವರು ಅತೀ ಕಡಿಮೆ ಸಮಯದಲ್ಲಿ ಚೀನೀ ಭಾಷೆಯನ್ನು ಕರಗತಮಾಡಿಕೊಂಡಿದ್ದರು. ಅವರು ಚೀನಾ ಮತ್ತು ಅದರ ಆರ್ಥಿಕತೆಯ ಅಧ್ಯಯನವನ್ನು ಒಳಗೊಂಡಿದ್ದ "ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಆದಾಯ ಹಂಚುವಿಕೆ" ವಿಷಯದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿಯನ್ನು ಪಡೆದಿದ್ದರು, ಹಾಗೂ ವಿಶ್ವಪ್ರಸಿದ್ಧ ನೊಬೆಲ್ ಪ್ರಶಸ್ತಿ ವಿಜೇತರಾದ ಪೌಲ್ ಎ. ಸ್ಯಾಮುಲ್ಸನ್ ಹಾಗೂ ಸೈಮನ್ ಕೂಸ್ ನಟ್ಸ್ ಜೊತೆ ಅರ್ಥಶಾಸ್ತ್ರದ ಅಧ್ಯಯನವನ್ನು ಮಾಡಿದ್ದರು. ಅವರು ಬೇರೆ ಯಾರು ಅಲ್ಲ ಡಾ. ಸುಬ್ರಮಣಿಯನ್ ಸ್ವಾಮಿ.
1975-76 ರ "ತುರ್ತು ಪರಿಸ್ಥಿತಿ" ಯ ನಂತರ, 1977 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿಯು ಅಧಿಕಾರಕ್ಕೆ ಬರುತ್ತದೆ. ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಆರಂಭದಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿಯವರಿಗೆ ಮಂತ್ರಿಮಂಡಲದಲ್ಲಿ ಸ್ಥಾನ ನೀಡಲಾಗುವುದು ಎಂದು ಹೇಳಲಾಗಿತ್ತು, ಆದರೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರು, ಡಾ. ಸ್ವಾಮಿಯವರನ್ನು ಬಂಧಿಸಲು ವಾರಂಟ್ ಜಾರಿ ಮಾಡಿದ್ದರು ಕೂಡ ಲೆಕ್ಕಿಸದೆ, ಡಾ. ಸ್ವಾಮಿಯವರು ಲೋಕಸಭೆಗೆ ಪ್ರವೇಶಿಸಿ, ಕಿರು ಭಾಷಣವನ್ನು ಮಾಡಿ ಪೋಲಿಸರಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾಗಿದ್ದರು, ಇದರಿಂದ ಡಾ. ಸುಬ್ರಮಣಿಯನ್ ಸ್ವಾಮಿಯವರು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯು ಕೂಡ ವಿಖ್ಯಾತರಾಗಿದ್ದರು, ಇದರ ಬಗ್ಗೆ ಅಸೂಯೆಯನ್ನು ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಡಾ. ಸ್ವಾಮಿಯವರಿಗೆ ಯಾವುದೇ ರೀತಿಯಲ್ಲಿ ಮಂತ್ರಿ ಸ್ಥಾನ ಸಿಗದ ಹಾಗೆ ಮಾಡಿದ್ದರು.
ಆದರೆ ಚೀನಾದ ರಾಯಭಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕಾರಣ ಡಾ. ಸುಬ್ರಮಣಿಯನ್ ಸ್ವಾಮಿಯವರಿಗೆ, ಜನತಾ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಚೀನಾಕ್ಕೆ ಭೇಟಿ ನೀಡಲು ಆಹ್ವಾನಿಸಲಾಗುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾರಾಗಿದ್ದ ವಾಜಪೇಯಿಯವರು ಇದಕ್ಕು ಕೂಡ ತಡೆಯೊಡ್ಡಲು ಪ್ರಯತ್ನಿಸುತ್ತಾರೆ. ಆದರೆ ಪ್ರಧಾನಮಂತ್ರಿಗಳಾಗಿದ್ದ ಮೊರಾರ್ಜಿ ದೇಸಾಯಿಯವರು, ಡಾ. ಸ್ವಾಮಿಯವರು ಹೋಗಬೇಕೆಂದು ಆಗ್ರಹಿಸಿದಲ್ಲದೆ, ಚೀನಾದಲ್ಲಿರುವ ಭಾರತದ ರಾಯಭಾರಿಯಿಂದ ಎಲ್ಲಾ ಸೌಲಭ್ಯವನ್ನು ನೀಡುವ ವ್ಯವಸ್ಥೆಯನ್ನು ಮಾಡುತ್ತಾರೆ. 1978 ರ ಸೆಪ್ಟಂಬರ್ ನಲ್ಲಿ ಭಾರತದ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಪ್ರತಿನಿಧಿಯಾಗಿ ಚೀನಾದ ವಿದೇಶಾಂಗ ವ್ಯವಹಾರಗಳ ಸಂಸ್ಥೆಯ ಆಹ್ವಾನದ ಮೇರೆಗೆ ಚೀನಾಕ್ಕೆ ಭೇಟಿ ನೀಡುತ್ತಾರೆ. ಅಲ್ಲಿ ಚೀನಾದ ಹಿರಿಯ ನಾಯಕರಾದ ಜೀ ಪೆಂಗ್ ಫೆ (ಚೀನೀ ಹೆಸರು) ಭೇಟಿಯಾಗುತ್ತಾರೆ. ಇದು ೧೯೬೨ ರ ಯುದ್ಧದ ನಂತರದ ಭಾರತ ಮತ್ತು ಚೀನಾದ ನಡುವೆ ಪ್ರಥಮ ಭಾರಿಗೆ ನಡೆದ ಮಾತುಕತೆ. ಈ ಭೇಟಿಯಿಂದ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಭಾರತ ಮತ್ತು ಚೀನಾದ ನಡುವಿನ ಸಂಬಂಧವನ್ನು ವರ್ಧಿಸುವಲ್ಲಿ ಶ್ರಮಿಸಿದಲ್ಲದೆ, ಕೈಲಾಸ ಮಾನಸ ಸರೋವರದ ದಾರಿ ತೆರೆಯುವ ಮಾತುಕತೆಯು ಕೂಡ ಪ್ರಾರಂಭಗೊಳ್ಳುತ್ತದೆ.
ಒಳಕಲಹದ ಕಾರಣ ಜನತಾ ಪಾರ್ಟಿಯ ಸರ್ಕಾರವು 2 ವರ್ಷಗಳ ಒಳಗಾಗಿಯೇ ಅಧಿಕಾರವನ್ನು ಕಳೆದುಕೊಳ್ಳುತ್ತದೆ. ಕೆಲವು ವಾರಗಳ ಸಮಯ ಇಂದಿರಾ ಗಾಂಧಿಯವರ ಬೆಂಬಲದಿಂದ ಚರಣ್ ಸಿಂಗ್ ಅವರು ಪ್ರಧಾನಮಂತ್ರಿಯಾಗುತ್ತಾರೆ. ೧೯೮೦ ರಲ್ಲಿ ಇಂದಿರಾ ಗಾಂಧಿಯವರು ಬೆಂಬಲ ಹಿಂಪಡೆದ ಕಾರಣ ಅದೇ ವರ್ಷ ಲೋಕಸಭಾ ಚುನಾವಣೆಯು ನಡೆಯುತ್ತದೆ. ಈ ಚುನಾವಣೆಯಲ್ಲಿ ಬಹುಮತದೊಂದಿಗೆ ಇಂದಿರಾ ಗಾಂಧಿಯವರ ಸರ್ಕಾರವು ಅಧಿಕಾರಕ್ಕೆ ಬರುತ್ತದೆ. ಆದರೆ ಇದರಿಂದ ಭಾರತ ಮತ್ತು ಚೀನಾದ ನಡುವೆ ಮಿತ್ರತ್ವವನ್ನು ವರ್ಧಿಸುವಲ್ಲಿ ಯಾವುದೇ ಅಡ್ಡಿಯಾಗಲಿಲ್ಲ.
ಡಾ. ಸುಬ್ರಮಣಿಯನ್ ಸ್ವಾಮಿ ಹಾಗೂ ಚೀನಾದ ಸರ್ವೋಚ್ಚ ನಾಯಕ ಡೆಂಗ್ ಕ್ಸಿಯೊಪಿಂಗ್ |
ಚೀನಾದಿಂದ ಡಾ. ಸುಬ್ರಮಣಿಯನ್ ಸ್ವಾಮಿಯವರಿಗೆ 1981 ರಲ್ಲಿ ಮೂರನೇ ಬಾರಿಗೆ ಚೀನಾಕ್ಕೆ ಭೇಟಿ ನೀಡಲು ಆಹ್ವಾನಿಸಲಾಗುತ್ತದೆ. ಈ ಆಹ್ವಾನ ಬಂದಿದ್ದು ಬೇರೆ ಯಾರಿಂದಲೂ ಅಲ್ಲ ಚೀನಾದ ಸರ್ವೋಚ್ಚ ನಾಯಕ ಡೆಂಗ್ ಕ್ಸಿಯೊಪಿಂಗ್ ಅವರಿಂದ. ಡಾ. ಸುಬ್ರಮಣಿಯನ್ ಸ್ವಾಮಿಯವರು ಈ ಭೇಟಿಯಲ್ಲಿ ಡೆಂಗ್ ಕ್ಸಿಯೊಪಿಂಗ್ ಅವರ ಜೊತೆ ಅಂತರಾಷ್ಟ್ರೀಯ ಸಮಸ್ಯೆ, ಭಾರತ ಹಾಗೂ ಚೀನಾದ ಗಡಿಭಾಗದ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಚರ್ಚಿಸಿದ್ದಲ್ಲದೆ, ಕೈಲಾಸ ಮಾನಸ ಸರೋವರದ ದಾರಿಯನ್ನು ತೆರೆಯುವ ಕುರಿತು ಚರ್ಚಿಸಲಾಗುತ್ತದೆ. "ಕೈಲಾಸ ಮಾನಸ ಸರೋವರ" ಎಂಬ ಹೆಸರು ಡೆಂಗ್ ಕ್ಸಿಯೊಪಿಂಗ್ ಅವರಿಗೆ ಅರ್ಥವಾಗುವುದಿಲ್ಲ, ಅವರು ಚೀನಾದ ಅಧಿಕಾರಿಗಳೊಂದಿಗೆ ಚೀನಿ ಹೆಸರನ್ನು ಕೇಳಿ ಪಡೆದುಕೊಂಡು, ದಾರಿಯನ್ನು ತೆರೆಯಲು ಒಂದು ಷರತ್ತಿನ ಮೇಲೆ ಒಪ್ಪಿಕೊಳ್ಳುತ್ತಾರೆ. ಅ ಷರತ್ತು ಏನೆಂದರೆ ದಾರಿ ತೆರೆದ ನಂತರ ಮೊದಲು ಡಾ. ಸ್ವಾಮಿಯವರು ಯಾತ್ರೆಯನ್ನು ಮಾಡಬೇಕೆಂಬುದಾಗಿತ್ತು.
ಶ್ರೀಮತಿ ಇಂದಿರಾ ಗಾಂಧಿಯವರ ಸರ್ಕಾರವಿರುವಾಗ ಡಾ. ಸುಬ್ರಮಣಿಯನ್ ಸ್ವಾಮಿಯವರು ವಿರೋದ ಪಕ್ಷದಲ್ಲಿದ್ದರು ಕೂಡ ಕೈಲಾಸ ಮಾನಸ ಸರೋವರದ ದಾರಿಯನ್ನು ಯಶಸ್ವಿಯಾಗಿ ತೆರೆಯುವಲ್ಲಿ ಸಫಲತೆಯನ್ನು ಪಡೆದಿದ್ದರು. ಡಾ. ಸ್ವಾಮಿ ಹಾಗೂ ಡೆಂಗ್ ಕ್ಸಿಯೊಪಿಂಗ್ ಅವರ ಮಾತುಕತೆಯ ನಂತರ ಚೀನಾದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಾರೆ. ಭಾರತೀಯ ಮಂತ್ರಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡಿದ್ದ ಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವರು ಕೈಲಾಸ ಮಾನಸ ಸರೋವರದ ವಿಷಯ ಬಂದಾಗ ಡಾ. ಸ್ವಾಮಿಯವರು ಮೊದಲ ಯಾತ್ರಾರ್ಥಿಗಳ ಗುಂಪಿನಲ್ಲಿ ಇರಲೇ ಬೇಕೆಂದು ಆಗ್ರಹಿಸಿದ್ದು, ನೆರೆದಿದ್ದ ಎಲ್ಲರಿಗು ಅಚ್ಚರಿ ಮೂಡಿಸುವ ಸಂಗತಿಯಾಗಿತ್ತು.
ಡಾ. ಸುಬ್ರಮಣಿಯನ್ ಸ್ವಾಮಿಯವರು ಹಾಗೂ ವಿರಾಟ್ ಹಿಂದುಸ್ಥಾನ ಸಂಗಮದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಶೆಟ್ಟಿಯವರು, ೨೦೧೬ ರ ಕೈಲಾಸ ಮಾನಸ ಸರೋವರದ ಯಾತ್ರೆಯ ಸಮಯ |
ಆದ ಕಾರಣ ಡಾ. ಸುಬ್ರಮಣಿಯನ್ ಸ್ವಾಮಿಯವರು 1981 ರ ಆಗಸ್ಟ್ ನಲ್ಲಿ ಪ್ರಥಮ ಯಾತ್ರಾರ್ಥಿಯಾಗಿ ಕೈಲಾಸದ ಮಾನಸ ಸರೋವರಕ್ಕೆ ಭೇಟಿ ನೀಡುತ್ತಾರೆ. ನಂತರ 2016 ರಲ್ಲಿ ಚೀನಾ ಸರ್ಕಾರದ ಅತಿಥಿಯಾಗಿ ಚೀನಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿಯೂ ಕೂಡ ಅಲ್ಲಿಗೆ ಭೇಟಿ ನೀಡುತ್ತಾರೆ.
- ಗುರುದತ್ತ್ ಶೆಟ್ಟಿ ಕಾರ್ಕಳ
Comments
Post a Comment