1962 ರ ಯುದ್ಧದ ನಂತರ ಮುಚ್ಚಲಾಗಿದ್ದ ಕೈಲಾಸದ ಮಾನಸ ಸರೋವರದ ದಾರಿಯನ್ನು ಯಶಸ್ವಿಯಾಗಿ ತೆರೆಯುವಲ್ಲಿ ಸಫಲತೆಯನ್ನು ಕಂಡ ವ್ಯಕ್ತಿ : ಡಾ. ಸುಬ್ರಮಣಿಯನ್ ಸ್ವಾಮಿ

ಡಾ. ಸುಬ್ರಮಣಿಯನ್ ಸ್ವಾಮಿ 1962 ರ ಯುದ್ಧದ ನಂತರ ಭಾರತ ಹಾಗೂ ಚೀನಾದ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿತ್ತು. ಈ ಸಂಬಂಧವನ್ನು ಸರಿಪಡಿಸುವಲ್ಲಿ ಯಾರು ಕೂಡ ವಿಚಾರಿಸಲಿಲ್ಲ. ಸುಮಾರು 15 ವರ್ಷಗಳು ಕೈಲಾಸದ ತಪ್ಪಲಲ್ಲಿರುವ ಮಾನಸ ಸರೋವರಕ್ಕೆ ಯಾತ್ರೆ ಕೈಗೊಳ್ಳುವಂತಿರಲಿಲ್ಲ. ಕೈಲಾಸ ಶಿವನು ನೆಲೆಸಿದ ತಾಣ, ಅದರ ತಪ್ಪಲಲ್ಲಿರುವ ಮಾನಸ ಸರೋವರವು ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬನಿಗೂ ಪವಿತ್ರವಾದದ್ದು. ಆದರೆ 1977 ರಲ್ಲಿ, ’ತುರ್ತು ಪರಿಸ್ಥಿತಿ’ ಘೋಷಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಸೋತು, ಪ್ರಥಮ ಭಾರಿಗೆ ಜನತಾ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬರುವವರೆಗು ಯಾರು ಯೋಚಿಸಿರಲಿಲ್ಲ. ಅಲ್ಲಿಂದ ಭಾರತ ಹಾಗೂ ಚೀನಾದ ನಡುವಿನ ವೈರತ್ವವು ಕೊನೆಗೊಂಡು, ಮಿತ್ರತ್ವವನ್ನು ಬೆಳೆಸಿಕೊಳ್ಳಲು ಮತ್ತು ಕೈಲಾಸ ಮಾನಸ ಸರೋವರದ ದಾರಿಯನ್ನು ಯಾತ್ರಾರ್ಥಿಗಳಿಗೆ ತೆರೆಯಲು ಮಾತುಗತೆಯು ಪ್ರಾರಂಭಗೊಳ್ಳುತ್ತದೆ. ಕೈಲಾಸ ಪರ್ವತ ಈ ವೈರತ್ವದ ನಡುವೆಯು ಕೂಡ ಒಬ್ಬ ಮನುಷ್ಯ ಆಗಾಗ್ಗೆ ಚೀನಾದ ರಾಯಭಾರಿ ಕಛೇರಿಗೆ ಬೇಟಿ ನೀಡಿ, ಮಿತ್ರತ್ವವನ್ನು ಬೆಳೆಸಲು ಸದಾ ಶ್ರಮಿಸುತ್ತಿದ್ದರು. ಅವರು ಅತೀ ಕಡಿಮೆ ಸಮಯದಲ್ಲಿ ಚೀನೀ ಭಾಷೆಯನ್ನು ಕರಗತಮಾಡಿಕೊಂಡಿದ್ದರು. ಅವರು ಚೀನಾ ಮತ್ತು ಅದರ ಆರ್ಥಿಕತೆಯ ಅಧ್ಯಯನವನ್ನು ಒಳಗೊಂಡಿದ್ದ "ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬ...